ಬೆಳಗಾವಿ: ಮುಂಬರುವ 2023 ವಿಧಾನಸಭಾ ಚುನಾವಣೆಯಲ್ಲಿ ಸ್ವಪಕ್ಷ ಬಿಜೆಪಿಯಲ್ಲಿ ಪೈಪೋಟಿ ಪ್ರಾರಂಭವಾಗಿದ್ದು, ಹಾಲಿ ಶಾಸಕ ಮಹೇಶ್ ಕುಮಠಳ್ಳಿ ಹಾಗೂ ಲಕ್ಷ್ಮಣ ಸವದಿ ನಡುವೆ ಟಿಕೆಟ್ ವಿಚಾರಕ್ಕೆ ಸ್ಪರ್ಧೆ ಏರಿದೆ.


COMMERCIAL BREAK
SCROLL TO CONTINUE READING

ಅಥಣಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಮೇಲೆ ಸವದಿ ಕಣ್ಣು!: ಪುತ್ರನಿಗೆ ಟಿಕೆಟ್ ನೀಡಲು ಲಾಬಿ!


2023ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಪಕ್ಷದಲ್ಲಿ ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದ್ದು,ಪ್ರತಿಷ್ಠಿತ ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಸದ್ಯ ಮಹೇಶ್ ಕುಮಠಳ್ಳಿ ಶಾಸಕರು,ಈ ಹಿಂದೆ ಕ್ಷೇತ್ರ ಪ್ರತಿನಿಧಿಸಿದ್ದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿರುದ್ಧ ಜಯ ಗಳಿಸಿದ್ದರು.


ಇದನ್ನೂ ಓದಿ :ಜನವರಿ 12 ರಂದು ಅವಳಿ ನಗರದಲ್ಲಿ ಪ್ರಧಾನ ಮಂತ್ರಿ ಮೋದಿಯಿಂದ ಯುವಜನೋತ್ಸವ ಉದ್ಘಾಟನೆ


ಆದರೆ 2023ರ ಸಾರ್ವತ್ರಿಕ ಚುನಾವಣೆ ಯಲ್ಲಿ ಕ್ಷೇತ್ರವನ್ನ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಸವದಿ ಸಜ್ಜಾಗಿದ್ದಾರೆ.ಸದ್ಯ ವಿಧಾನ ಪರಿಷತ್ ಸದಸ್ಯರಾಗಿರುವ ಲಕ್ಷ್ಮಣ ಸವದಿ, ಪುತ್ರ ಚಿದಾನಂದ ಸವದಿಗೆ ಬಿಜೆಪಿ ಟಿಕೆಟ್ ಕೊಡಿಸಲು ತಯಾರಿ ನಡೆಸುತ್ತಿದ್ದಾರೆ.


ಇದನ್ನೂ ಓದಿ :ಕೊರೊನಾ ಬಗ್ಗೆ ಗಾಬರಿಯಾಗಬೇಕಾಗಿಲ್ಲ-ಸಿಎಂ ಬೊಮ್ಮಾಯಿ


ಪುತ್ರನಿಗೆ ಟಿಕೆಟ್ ಕೊಡಿಸುವ  ಮೂಲಕ ಜಿಲ್ಲೆಯಲ್ಲಿ ಮೂಲ ಕಮಲ ನಾಯಕರು ಮತ್ತೊಮ್ಮೆ ಪ್ರಭುತ್ವ ಸ್ಥಾಪಿಸಲು ಲಕ್ಷ್ಮಣ ಸವದಿ ಸಿದ್ದತೆ ನಡೆಸುತ್ತಿದ್ದಾರೆ.ಇದರ ಜೊತೆಗೆ ಸವದಿ ಸಾರ್ವತ್ರಿಕ ಚುನಾವಣೆಯಿಂದ ದೂರಾದ್ರೂ ಪುತ್ರನ ಮೂಲಕ ರಾಜಕೀಯದ ಸೆಕೆಂಡ್ ಇನ್ನಿಂಗ್ಸ್ ಆರಭಿಸಲು ಚಿಂತನೆ.ಈಗಾಗಲೇ ಜಾರಕಿಹೊಳಿ ಕುಟುಂಬ, ಕತ್ತಿ ಕುಟುಂಬ, ಜೊತೆಗೆ ಸಂಸದ ಅಂಗಡಿ ಕುಟುಂಬ ಸಕ್ರಿಯವಾಗಿದ್ದು,ನಮ್ಮ ಕುಟುಂಬಕ್ಕೆ ಟಿಕೆಟ್ ನೀಡಿದ್ರೆ, ಪಕ್ಷ ಬಲವರ್ಧನೆಗೆ ಸಹಕಾರಿ ಎಂಬ ವಾದ ಸವದಿಯದ್ದು. ಒಟ್ಟಾರೆ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಅಥಣಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಹುರಿಯಾಳು ಯಾರು ಎಂಬ ಪ್ರಶ್ನೆಗೆ ಹೈಕಮಾಂಡ್ ಉತ್ತರ ನೀಡಲಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.